ಗೆಳೆಯರೇ,
ವಿವಿಧ ಪತ್ರಿಕೆ, ಪುಸ್ತಕಗಳಲ್ಲಿ ನಾವು ಹಲವು ಮಹತ್ವದ ಲೇಖನಗಳನ್ನು ನೋಡಿದ್ದೇವೆ.ಓದಿದ್ದೇವೆ. ಈ ಲೇಖನ ಬೇಕೆಂದಾಗ ಸಿಕ್ಕರೆ ಎಷ್ಟು ಚೆಂದ ಅನ್ನಿಸಿದೆಯಲ್ಲವೇ? ಅದೇಲೇಖನವನ್ನು ಮತ್ತೆ ಹುಡುಕಿದರೂ ಸಿಗುವುದಿಲ್ಲ ಯಾಕೆಂದರೆ ಈ ದಿನದ ಸುದ್ದಿ ನಾಳೆಗೆರದ್ದಿಯಾಗಿಬಿಡುತ್ತದೆ. ಮಹತ್ವದ ವಿಚಾರಗಳು ರದ್ದಿಯಾಗುವುದನ್ನು ತಪ್ಪಿಸಬೇಕು. ಅದುಎಲ್ಲರಿಗೂ ಲಭ್ಯವಾಗುವಂತಾಗಬೇಕು. ಅದಕ್ಕೇ ಈ ಹೊಸ ಪ್ರಯತ್ನ.
ಎಲ್ಲೇ ಆಗಲಿ ಯಾವುದೇ ಪತ್ರಿಕೆ, ಪುಸ್ತಕದಲ್ಲಾಗಲೀ ನೀವು ಓದಿದ ಯಾವುದೇ ವಿಚಾರಮಹತ್ವ, ಸಂಗ್ರಹಯೋಗ್ಯ ಎಂದು ನಿಮಗನಿಸಿದರೆ ಅದನ್ನು ಸ್ಯ್ಕಾನ್ ಮಾಡಿಯೋ, ಇಲ್ಲರೀಟೈಪ್ ಮಾಡಿಯೋ ಇಲ್ಲಿ ಪೋಸ್ಟ್ ಮಾಡಿ. ಆದರೆ ನೀವು ಎಲ್ಲಿಂದ ಆ ಲೇಖನ ಅಥವಾವಿಚಾರವನ್ನು ಎತ್ತಿಕೊಂಡಿದ್ದೀರ ಎನ್ನುವುದನ್ನು ಟೈಟಲ್ ವಿಭಾಗದಲ್ಲಿ ತಪ್ಪದೇನಮೂದಿಸಿ. ದಿನಾಂಕವೂ ಇರಲಿ.
ಇದು ನಿಮ್ಮ ಲೋಕ. ಬೆಳೆಸುವವರೂ ನೀವೇ, ಮುಂದಿನ ಜನಾಂಗಕ್ಕೆ ಉಳಿಸುವವರೂ ನೀವೇ.
"ಜ್ಞಾನ ಎಲ್ಲರ ಸ್ವತ್ತು, ಅದು ಎಲ್ಲರಿಗೂ ಸುಲಭವಾಗಿ ಲಭ್ಯವಾಗಬೇಕು"
http://kannadaloka.ning.com
No comments:
Post a Comment